Thursday, June 30, 2016

ಗುಬ್ಬಚ್ಚಿ ಗೂಡು..
ನಮ್ಮನೆಯಲ್ಲಿ ಗುಬ್ಬಿಗಳ ತಲೆಮಾರು ಎಷ್ಟು ಹೋಗಿದ್ದಾವೋ ಗೊತ್ತಿಲ್ಲ, ನಾನು ಹುಟ್ಟಿ ನನ್ನ ಮಗನೊಟ್ಟಿಗೆ ಆಡುವಾಗಲು ಈ ಸಂತತಿ ಬೆಳ್ಕೊಂಡು ಬಂದಿದೆ, ಈ ಗುಬ್ಬಿ ಮಹಾಶಯರಿಗೆ ಅದೆಷ್ಟು ಕಾಟ ಕೊಟ್ಟಿದ್ದೇವೊ ಗೊತ್ತಿಲ್ಲ, ನನ್ನ ಅಜ್ಜ ಕಟ್ಟಿದ ಮನೆ ಅದೆಷ್ಟು ಬಾರಿ ಮಾರು ಸರಿಪಡಿಸಿದೆವೋ ಗೊತ್ತಿಲ್ಲ, ಆದರೂ ಆ ಗೂಡು ತಮಗೆ ಬಂದ ಪಿತ್ರಾರ್ಜಿತ ಆಸ್ತಿಯಂತೆ ಈಗಲೂ ಚಿವ್ ಅನ್ನುತ್ತಿರುತ್ತವೆ..
ಅಜ್ಜ ಹೇಳುತ್ತಿದ್ದ ನೆನಪು "ನಾವು ಬದುಕಿದರೆ ಸಾಲದು ನಮ್ಮೊಟ್ಟಿ ಉಳಿದವರು ಬದುಕಬೇಕು, ಇಷ್ಟು ದೊಡ್ಡ ಮನೆಯಲ್ಲಿ ಅವಕ್ಕೆ ಗೂಡು ಕಟ್ಟಿ ಕೊಟ್ಟರೆ ಏನಾದೀತು??". ನಮ್ಮ ಮನೆಯಲ್ಲಿ ಈಗಲೂ ಅವು ಬೆಚ್ಚಗಿದ್ದು, ನನ್ನ ಅಜ್ಜನನ್ನ ಎಷ್ಟು ನೆನೆಯುತ್ತವೊ ಏನೋ..

No comments:

Post a Comment