Thursday, June 30, 2016

ನಮ್ಮನೆ ಗೌರಿ ಹಬ್ಬ..
ಗೌರಿ ಹಬ್ಬದ ದಿನ ನಮ್ಮ ಮನೆಯಲ್ಲಿ ವಿಶೇಷ ಆಸಕ್ತಿ, ನನ್ನ ಮುತ್ತಜ್ಜಿ ಕಾಲದಿಂದಲೂ ಮುಂದುವರೆಸಿಕೊಂಡು ಬಂದು ನಮ್ಮ ಮನೆಯ ಖುಷಿಗೆ , ಭಕ್ತಿ ಆಚರಣೆಗೆ ಕಾರಣವಾಗಿದೆ..
ದೊಡ್ಡಮ್ಮರ ದಂಡು, ಅತ್ತೆಯರು, ಅಣ್ಣ, ತಮ್ಮ,ಮಾವನ ಮಕ್ಕಳು, ಅಜ್ಜಿಯರ ಬೈಗುಳ ಹೀಗೆ ಹಬ್ಬಕ್ಕೆ ತನ್ನದೆ ಆದ ವಿಷೇಶ ರೂಪಕ್ಕೆ ನಮ್ಮ ಮನೆ ಸಜ್ಜಾಗುತ್ತದೆ..
ತವರು ಮನೆಗೆ ಸೀಮಿತವಾಗಿರುವ ಈ ಹಬ್ಬಕ್ಕೆ ನನ್ನ ಅಮ್ಮಂದಿರೆಲ್ಲಾ ಒಟ್ಟಿಗೆ ಸೇರಿ ಗೌರಿಯನ್ನು ಪೂಜಿಸೋ ರೀತಿ, ಆಗಿನ ಸಂಪ್ರದಾಯ ಎಲ್ಲವೂ, ಮತ್ತೆ ಮತ್ತೆ ಹಳತನ್ನು ನೆನಪಿಸುವಂತೆ ಮಾಡುತ್ತದೆ..
ಹಳೆಯ ಬೇರುಗಳು ಹೊಸ ಚಿಗುರನ್ನು ಬೆಸೆದು ಸಂಪ್ರದಾಯವನ್ನು ಬೆಳೆಸುವ ಹಬ್ಬಕ್ಕೆ, ಅದನ್ನು ಹೇಳಿಕೊಡುವ ನನ್ನ ಅಮ್ಮಂದಿರಗೆಲ್ಲಾ ನನ್ನ ಸಾಷ್ಟಾಂಗ ನಮನಗಳು..

No comments:

Post a Comment