Thursday, June 30, 2016

ಗೆಳೆಯರೊಟ್ಟಿಗೆ..

ತುಂಬಾ ದಿನಗಳ ನಂತರ ಗೆಳೆಯರ ಬಳಗವೇನೋ ಹುಟ್ಟಿತು, ಎಷ್ಟು ಮಂದಿಗೆ ಚಿಕ್ಕoದಿನ ನೆನಪೋ ಗೊತ್ತಿಲ್ಲ.. ನನಗೆ ನೆನಪಿರುವ ಮರೆಯಲು ಇಷ್ಟ ಪಡದ ಕೆಲವು ಸಿಹಿ ನೆನಪುಗಳ ಈಗಲೂ ಮೆಲಕಾಡುತ್ತಿರುವೆ..
ಎ ಮತ್ತು ಬಿ ಎಂಬೆರೆಡು ಸೆಕ್ಷೆನ್, ತಾನು ಹೆಚ್ಚು ತಾನು ಹೆಚ್ಚು ಎನ್ನುತ್ತಿದ್ದ ಕಾಲ.. ದಡ್ಡರಾರು ಇರಲಿಲ್ಲ, ಬುದ್ಧಿಗೆ ಅಂಕ ಒಂದೇ ಅಳತೆ ಕೋಲು.. Rank ಪಡೆಯೋ ದೊಡ್ಡ ದಂಡೆ ಇತ್ತು.. ಯಾರು ಯಾರಿಗೂ ಕಡಿಮೆ ಇರಲಿಲ್ಲ, ಈಗಲೂ ಇಲ್ಲ. ಸ್ವಲ್ಪ ದಿನದ ನಂತರ ಒಂದೊಂದೆ ಕೊಂಡಿ ಕಳಚಿ ಹೋದರು, ಕಳೆದು ಹೋಗಿರಲಿಲ್ಲ. ಖುಷಿಯ ವಿಚಾರವೆಂದರೆ ಸರಪಣಿಗೆ ಮುತ್ತಿನ ಹಾರವಾಗುವ ಆಸೆ ಎಲ್ಲರಿಗೂ ಇದೆ, ಆದರೆ ಸಮಯವೆಂಬ ದಾರ ಹೊಸೆಯುವುದು ತಡವಾಗಿದ್ದು. ಚಿಕ್ಕವರೆಲ್ಲ ದೊಡ್ಡವರಾಗಿ ಗೂಡು ಬಿಟ್ಟು, ಗೂಡು ಕಟ್ಟಿ ಮತ್ತೆ ಸೇರಿದ್ದಕ್ಕೆ ಎಲ್ಲರನ್ನಾ ಪ್ರೀತಿ ಪೂರ್ವಕ ಸ್ವಾಗತ.. ಮಾತು ಬೇಸರವಾದರೆ, ಯಾರಾದರು ಕಾಲೆಳೆದರೆ, ಹುಸಿ ಮುನಿಸಿಕೊಳ್ಳಿ ಸಾಕು, ಹೆಚ್ಚೇನು ಬೇಡ, ಮುತ್ತಿನ ಹಾರಕ್ಕೆ ಮುತ್ತಿನಂತ ಗೆಳೆಯರ ಬಳಗವಿರಲಿ..

No comments:

Post a Comment