Thursday, August 27, 2015

ಮನದಾಳವೇ

ಮೊನ್ನೆ ಮೊನ್ನೆವರೆಗೂ (ತಿಂಗಳಾಗಿದೆ), ಮಗನನ್ನು ಕಾಣುವವರೆಗೂ ಅಪ್ಪ ಅನೋ ಪದಕ್ಕೆ ಅಷ್ಟು ಕರುಳ ನಂಟಿದೆ  ಅಂತ ತಿಳಿದಿರಲಿಲ್ಲ. ನನ್ನ ಮಗುವ ಮುಖ ನೋಡಿದರೆ ಸಾಕು ಇರುವ ಆಯಾಸ, ದಣಿವು ಮರೆತು ಹೋಗುತ್ತೆ. ಎಲ್ಲಾ ಮರೆತು ಮಗುವಿನೊಂದಿಗೆ ಮಗುವಾಗುವ ಅನಿಸುತ್ತೆ. ಇಲ್ಲಿ ಕೇವಲ ಮಗನ ಬಗ್ಗೆ ಹೇಳಿಕೊಂಡರೆ ನನ್ನ ಮಡದಿ ಮುಖ ಊದಿಸಿಕೊಂಡು ಹೇಳೋ ಮಾತು ''ನಾನು ಬಂದ ಮೇಲೆ ಅವನು ಬಂದಿರೋದು! ನೆನಪಿರಲಿ''. ಅವಳಿಗೋ ಮಗ ಬಂದ ಮೇಲೆ ತನ್ನ ಮೇಲಣ ಪ್ರೀತಿ ಕಡಿಮೆಯಾಗಿ ಹೋಗಿದೆ ಎಂದು ಅನಿಸೋಕೆ ಶುರುವಾಗಿದೆ. ಅವಳಿಗೆ ತಾನು ನನ್ನನ್ನು ಪ್ರೀತಿಸಿ ಮದುವೆಯಾಗಿದ್ದರಿಂದಲೋ ಏನೋ ತುಸು ಹೊಟ್ಟೆ ಕಿಚ್ಚು. ನಾ ಮಾಡೋ ಕೆಲಸಕ್ಕೆ ಕೆಲಸನೇ ಇಲ್ಲ ಯಾವಾಗಲೂ ಕೆಲಸ ಕೆಲಸ ಅನ್ನುತ್ತೆ. ಮಗನನ್ನು ನೋಡೊ ಆಸೆ ಹೆಚ್ಚಾಗಿದೆ, ಎಂದು ಹೋಗೋದು ಗೊತ್ತಿಲ್ಲ..

No comments:

Post a Comment