Saturday, August 1, 2015

Remove Dubbing Ban

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋದದ ಬಗ್ಗೆ ಭಾರಿ ಕಿತ್ತಾಟ ನಡೆಯುತ್ತಿದ್ದು, ಇದೀಗ ಡಬ್ಬಿಂಗ್ ಪರ ವಿರೋಧಿಗಳು ಆಗಸ್ಟ್ 2, ಭಾನುವಾರದಂದು ಡಬ್ಬಿಂಗ್ ಸಂಸ್ಕೃತಿಯನ್ನು ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲು ಕೂಡ ಮುಂದಾಗಿದ್ದಾರಂತೆ.

ಅದೇನೇ ಇರಲಿ ಸದ್ಯಕ್ಕೆ ಈ ವಿಚಾರದ ಬಗ್ಗೆ ಸಾಮಾಜಿಕ ಜಾಲಾ ತಾಣಗಳಲ್ಲಿ ವ್ಯಾಪಕ ಚರ್ಚೆ ಉಂಟಾಗುತ್ತಿದ್ದು, ಖ್ಯಾತ ಯುವ ಕನ್ನಡ ಪರ ಚಿಂತಕ ವಸಂತ ಶೆಟ್ಟಿ ಅವರು ಡಬ್ಬಿಂಗ್ ಬಗ್ಗೆ ತಮ್ಮ ಅಭಿಪ್ರಾಯವನ್ನು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.

ಡಬ್ಬಿಂಗ್ ವಿರೋಧದ ಬಗ್ಗೆ ಬೊಬ್ಬೆ ಹೊಡೆಯುವ ಕೆಲ ಮಂದಿಗೆ ಉದಯವಾಣಿಯ ಜನಪ್ರಿಯ ಅಂಕಣ 'ಕನ್ನಡ ಜಗತ್ತು' ಇದರ ಅಂಕಣಕಾರ ಹಾಗೂ ಯುವ ಕನ್ನಡ ಪರ ಚಿಂತಕ ವಸಂತ ಶೆಟ್ಟಿ ಅವರು ಫೇಸ್ ಬುಕ್ಕಿನಲ್ಲಿ ಸಖತ್ ಟಾಂಗ್ ನೀಡಿದ್ದಾರೆ.[ಡಬ್ಬಿಂಗ್, ಕನ್ನಡಕ್ಕೆ ಪೂರಕವೇ ಮಾರಕವೇ ಜನರೇ ನಿರ್ಧರಿಸಲಿ]

ಇತ್ತೀಚೆಗೆ ವಸಂತ್ ಶೆಟ್ಟಿ ಅವರು ಡಬ್ಬಿಂಗ್ ಬಗ್ಗೆ ರೆಡ್.ಎಫ್.ಎಮ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಮೊನ್ನೆ ಮೊನ್ನೆ ತೆರೆ ಕಂಡ ಅತ್ಯಂತ ಬಿಗ್ ಬಜೆಟ್ ನ ಚಿತ್ರ 'ಬಾಹುಬಲಿ' ಕರ್ನಾಟಕದ 600ರಲ್ಲಿ 300 ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು.

ಕನ್ನಡದ ನಿರ್ಮಾಪಕರೊಬ್ಬರು ಅದನ್ನು ಬಿಡುಗಡೆ ಮಾಡಿದ್ದು, ಆದ್ರೆ ವಿಚಿತ್ರ ಅಂದ್ರೆ ಎಲ್ಲಾ ಕನ್ನಡಿಗರು ಅದನ್ನು ತೆಲುಗಲ್ಲಿ ನೋಡುವುದು, ಕನ್ನಡ ಪರವೋ, ಅಥವಾ ಕನ್ನಡದಲ್ಲಿ ನೋಡುವುದೋ, ಅಂತ ಯಾರಿಗೂ ಅರ್ಥವಾಗದೇ ಇದ್ದ ಸಂಗತಿ.[ಡಬ್ಬಿಂಗ್ ಬೆಂಬಲಿಗರಿಗೆ ಆನೆಬಲ: ವಾಣಿಜ್ಯ ಮಂಡಳಿಗೆ ಮುಖಭಂಗ]

ರೀಸೆಂಟ್ ಆಗಿ ಮಂಗಳೂರಿನಲ್ಲಿ ತುಳು ಚಿತ್ರೋದ್ಯಮ ಸ್ವಲ್ಪ ಮಟ್ಟಿಗೆ ಬೆಳೆಯುತ್ತಿದೆ, ಅಲ್ಲಿಯವರೂ ಕರಾವಳಿ ಸೊಗಡನ್ನು ತಮ್ಮ ಚಿತ್ರದಲ್ಲಿ ಬಿಂಬಿಸುತ್ತಾರೆ. ಹಾಗಂತ ಅದು ಕನ್ನಡಕ್ಕೆ ಡಬ್ ಆಯ್ತು ಅಂತಿಟ್ಕೊಳ್ಳಿ ಆವಾಗ ಕರ್ನಾಟಕದ ಒಂದು ಭಾಗದ ಸಂಸ್ಕೃತಿ ಇಡೀ ಕರ್ನಾಟಕದಾದ್ಯಂತ ಪರಿಚಯವಾಗುವುದಿಲ್ಲವೇ.

ಒಟ್ಟಿನಲ್ಲಿ ಸಂಸ್ಕೃತಿ ಹಾಳಾಗುತ್ತದೆ ಅನ್ನೋದು ಮೂರ್ಖತನದ ಮಾತು, ಏನೋ ಕನ್ನಡದ ಉದ್ಯಮದ ಹಿತ ಕಾಯಲು ಡಬ್ ಚಿತ್ರಗಳ ಮೇಲೆ ಮನರಂಜನೆ ತೆರಿಗೆ ಹಾಕಲಿ, ಒಂದಿಷ್ಟು ಸರ್ಕಾರದಿಂದ ರಿಯಾಯಿತಿ ಕೇಳಲಿ, ಅದು ಬಿಟ್ಟು ಡಬ್ಬಿಂಗ್ ಮಾಡೋಕೆ ಬಿಡಲ್ಲ, ಅದು ಮಾಡ್ತೀವಿ ಇದು ಮಾಡ್ತೀವಿ ಅಂದ್ರೆ ಅದನ್ನು ಯಾರೂ ಒಪ್ಪುವುದಿಲ್ಲ.[ಇನ್ನು ಡಬ್ಬಿಂಗ್ ತಡೆಯೋಕಾಗಲ್ಲ, ನೋಡ್ತಾ ಇರಿ ಏನೇನಾಗತ್ತೆ ಅಂತ!]

ಸುಮಾರು ಹತ್ತು ಸಾವಿರ ವರ್ಷಗಳ ಇತಿಹಾಸದ ಜೊತೆಗೆ ಎರಡು ಸಾವಿರ ವರ್ಷ ಬರವಣಿಗೆ ಇತಿಹಾಸವಿರುವ ಕನ್ನಡಕ್ಕೆ ಡಬ್ಬಿಂಗ್ ಬಂದ್ರೆ ಕನ್ನಡ ಸಂಸ್ಕೃತಿ ಹಾಳಾಗುತ್ತದೆ ಅನ್ನೋದು ಮೂರ್ಖತನದ ಮಾತುಗಳು. 'ಅವತಾರ್' ತರದ ಒಳ್ಳೆಯ ಸಿನೆಮಾವನ್ನು ಕನ್ನಡದಲ್ಲಿ ನೋಡಲು ಬಯಸುವುದು ತಪ್ಪಲ್ಲಾ.[ಡಬ್ಬಿಂಗ್ ಮಂಡಳಿ ಅಧ್ಯಕ್ಷರಿಗೆ ಜೀವ ಬೆದರಿಕೆ ಹಾಕಿದವರಾರು?]

ಹಿಂದೆ 60ರ ದಶಕದಲ್ಲಿ ಡಬ್ಬಿಂಗ್ ನಿಷೇಧ ಮಾಡಿದ್ದಕ್ಕೆ ಒಂದಿಷ್ಟು ಸಮರ್ಥನೆ ಇದೆ. ಯಾಕೆಂದರೆ ಆವಾಗ ಕನ್ನಡ ಚಿತ್ರೋದ್ಯಮ ತುಂಬಾ ಚಿಕ್ಕದಾಗಿತ್ತು, ಆದರೆ ಇತ್ತೀಚೆಗೆ ಜಾಗತೀಕರಣದ ಈ ಕಾಲದಲ್ಲಿ ತಂತ್ರಜ್ಞಾನದ ಕ್ರಾಂತಿ, ಅಂತರ್ಜಾಲ, ವಲಸೆ ಇರುವ ಕಾಲದಲ್ಲಿ ಡಬ್ಬಿಂಗ್ ಬ್ಯಾನ್, ಅಂದ್ರೆ ಕನ್ನಡಿಗರನ್ನು ಬಾವಿಯ ಕಪ್ಪೆಯನ್ನಾಗಿಸುತ್ತದೆ ಹೊರತು ಇನ್ಯಾವ ಲಾಭವೂ ಇಲ್ಲ ಎಂದು ಡಬ್ಬಿಂಗ್ ಬಗ್ಗೆ ವಸಂತ್ ಶೆಟ್ಟಿ ಅವರು ಖಡಕ್ ಮಾತುಗಳನ್ನಾಡಿದ್ದಾರೆ.

No comments:

Post a Comment