Saturday, June 25, 2022

ಹಾಯ್ಕು 25.06

ಎಲ್ಲರೂ
ಮಲಗೋ
ಹೊತ್ತು,

ಪೂರ್ಣಚಂದ್ರ
ಮುನಿಸಿಕೊಂಡಿದ್ದ!

ಅವಳು
ಚಂದ್ರನ
ಬೆಳದಿಂಗಳ
ಕದ್ದದ್ದು
ಅವನಿಗೀಗ
ಗೊತ್ತಾಗಿ ಹೋಗಿತ್ತು..

~ಪ್ರಮಾ

Thursday, March 31, 2022

ಹಾಯ್ಕು

ಅವಳು
ಸ್ವಲ್ಪ
ಹಾಗೇನೇ...

ಸರಿ
ಹೊತ್ತಿನ
ಕನಸಲಿ
ಸವಾರಿ
ಮಾಡಿ
ಮುಂಜಾವಿಗೆ
ಮನೆ
ಸೇರುತ್ತಾಳೆ...

ನಾನೋ
ನಿದ್ದೆಗಣ್ಣಲಿ
ಎದ್ದು
ಅವಳ
ಮನೆ
ಹುಡಕ
ಹೊರಡಬೇಕು...

~ಪ್ರಮಾ

Friday, August 13, 2021

ಹಾಯ್ಕುಗಳು

ಊರಿನವರು 

'ಆತನಿಗೆ' 'ಈತ'

ಬಲಗೈ ಬಂಟ 

ಎನ್ನುತ್ತಿದ್ದರು...

ಆತನೋ ಹುಟ್ಟು 'ಎಡಚ'😋

~ಎಡಚರ ದಿನ
~ಆಲಸಿ

Saturday, August 7, 2021

ಹಾಯ್ಕುಗಳು

ಅಲ್ಲೊಬ್ಬ...

ತನ್ನ ರಾತ್ರಿಯ ನಿದ್ರೆಗಳನ್ನೆಲ್ಲಾ ಹರಾಜಿಗೆ ಇಟ್ಟಿದ್ದ,

ಕಾರಣ,

ತನ್ನ ಪ್ರೀತಿಯನ್ನ ಸೊತು, ಕನಸುಗಳ ಸಾಲ ಮಾಡಿದ್ದ😔

~ಆಲಸಿ

ಹಾಯ್ಕುಗಳು

ಅಲ್ಲೊಬ್ಬ...

ರಾತ್ರಿ ಇಡೀ ಕನಸಿನಲಿ,
ಗೆಳತಿಯೊಂದಿಗೆ 
ನಡೆದ,
ಕುಣಿದ,
ಎಡವಿ ಗಾಯವನ್ನೂ ಮಾಡಿಕೊಂಡ!

ಬೆಳೆಗೆದ್ದಾಗ ಹೆಬ್ಬರಳಿಗೆ ಯಾರೋ ಮದ್ದು ಹಚ್ಚಿ ಹೋಗಿದ್ದರು...

ಮುಗಳ್ನಕ್ಕ😊

ಅವಳೇ ಇರಬೇಕು...💞

~ಆಲಸಿ

ಹಾಯ್ಕುಗಳು

ಹೊಗಳಿಕೆ ಮಾತೇಕೆ?, 
ನಾ ಮಳೆಯಾದಾಗ, ನೀ ಬೂಮಿಯಾಗು ಸಾಕು...💞

~ಆಲಸಿ

Friday, September 22, 2017

Lactose Intolerance

ಲ್ಯಾಕ್ಟೋಸ್ ಇಂಟಾಲರನ್ಸ್ – ಹಾಲನ್ನು ಅರಗಿಸಿಕೊಳ್ಳಲಾಗದ ತೊಂದರೆ!https://honalu.net/2017/09/11/%e0%b2%b2%e0%b3%8d%e0%b2%af%e0%b2%be%e0%b2%95%e0%b3%8d%e0%b2%9f%e0%b3%8b%e0%b2%b8%e0%b3%8d-%e0%b2%87%e0%b2%82%e0%b2%9f%e0%b2%be%e0%b2%b2%e0%b2%b0%e0%b2%a8%e0%b3%8d%e0%b2%b8%e0%b3%8d-%e0%b2%b9/